ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡಿ ಬೆಳೆದು ಬಂದಿರುವ ಮಂಜುರವರು ಬಿಗ್ ಬಾಸ್ ನಲ್ಲಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇದೀಗ ಬಿಗ್ ಬಾಸ್ ಕಾರ್ಯಕ್ರಮ ಕನ್ನಡ ಕಿರುತೆರೆಯಲ್ಲಿ ಮತ್ತೊಮ್ಮೆ ಯಶಸ್ವಿ ರಿಯಾಲಿಟಿ ಕಾರ್ಯಕ್ರಮಗಳ ಸಾಲಿಗೆ ಸೇರಿ ಕೊಂಡಿದೆ, ಕಳೆದ ಕೆಲವು ಸೀಸನ್ ಗಳಿಗೆ ಹೋಲಿಸಿದರೆ ಬಿಗ್ ಬಾಸ್ ಪ್ರೇಕ್ಷಕರನ್ನು ಸೆಳೆಯುವಲ್ಲಿ ಕೊಂಚ ವಿಫಲವಾದರೂ ಕೂಡ ದಿನೇ ದಿನೇ ತನ್ನ ಪ್ರೇಕ್ಷಕರನ್ನು ಹೆಚ್ಚಿಸಿ ಕೊಳ್ಳುತ್ತಿರುವ ಕಾರಣ ಇನ್ನು ಕೆಲವೇ ಕೆಲವು ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಮತ್ತೊಮ್ಮೆ ರಾರಾಜಿಸಲಿದೆ.

ಇನ್ನು ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುರಿತು ಮಾತನಾಡುವುದಾದರೇ ಇತ್ತೀಚಿಗೆ ಕೊಂಚ ಕಡಿಮೆ ಪ್ರೇಕ್ಷಕರನ್ನು ನಗಿಸುತ್ತಿದ್ದರು ಕೂಡ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ದಿನದಿಂದಲೂ ಕೂಡ ಮಂಜು ಪಾವಗಡ ರವರು ಪ್ರೇಕ್ಷಕರನ್ನು ನಕ್ಕು ನಲಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ಕಾರಣಕ್ಕಾಗಿ ಮೊದಲ ಒಂದಷ್ಟು ವಾರಗಳ ಕಾಲ ಪ್ರತಿಯೊಬ್ಬರು ಮಂಜು ಪಾವಗಡ ರವರು ವಿನ್ನರ್ ಆಗುತ್ತಾರೆ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದರು.

ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಕಂಡಿರುವ ಮಂಜು ಪಾವಗಡ ರವರು, ಮಜಾಭಾರತ ಕಾರ್ಯಕ್ರಮಕ್ಕೂ ಮುನ್ನ ಒಂದು ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುತ್ತಿದ್ದರು, ಮೂರು ಹೊತ್ತಿನ ಊಟಕ್ಕೂ ಕೂಡ ಕಷ್ಟಪಟ್ಟು ಹಂತಹಂತವಾಗಿ ತಮ್ಮ ಜೀವನವನ್ನು ರೂಪಿಸಿ ಕೊಂಡಿರುವ ಮಂಜು ಪಾವಗಡ ರವರು ಇಂದು ಬಿಗ್ ಬಾಸ್ ಮನೆಯಲ್ಲಿ ಒಂದು ವಾರಕ್ಕೆ 35 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Comments are closed.